Submission 5288

ಗಂಗಾರತಿ

ರಚನೆ : ಷಡಕ್ಷರಿ ಸೊಪ್ಪಿಮಠ

----------------------------------

ರಿಷಿಕೇಶನನ್ನ ತಬ್ಬಿ ಹರಿಯುವಳು ಇವಳು, ಒಮ್ಮೆ ನೀಲಿಯಾಗಿ, ಮಗದೊಮ್ಮೆ ಹಾಲಾಗಿ । ಬೇಸಿಗೆಯಲ್ಲಿ ತುಂಬಿ ತುಳುಕುವವಳಲ್ಲ, ಆದರೂ ಗಂಗಾ ಮೈದುಂಬಿ ಹರಿಯುವಳು ।। ಸೂರ್ಯ ನೀರನು ಬಂಗಾರ ಮಾಡಿ ಹೊರಟಾಗ, ಜೀವ ಜೀವದ ಕಣ್ಣಲ್ಲಿ ದೀಪ ಬೆಳಗುವಾಗ, ಹೆದ್ದಾರಿ ಮೇಲಿನ ಗಾಡಿದೀಪಗಳು ಜೊತೆಯಾದಾಗ, ಅದುವೇ ಮಹಾ ಮಂಗಳಾರತಿ, ಗಂಗಾರತಿ ।। ಗಂಗಾಳ ನಡುವೆ ಎದ್ದಿರುವ ಬಂಡೆಗಾತು ಕೂತು, ಜಗವನೇ ಮರೆತು, ಜಗವನನುಭವಿಸುವಾಗ, ಕೇಳಿಸುವುದು - ನಿಟ್ಟುಸಿರು, ಸೆಡಹು, ತಪನೆ ಇನ್ನೇನೋ । ಲಕ್ಷ್ಯಗೊಟ್ಟರೆ ನಗುವನೂ ಕೇಳಬಹುದು. ಹೌದು, ಅದು ಗಂಗಾಳದೇ ನಗು ।।

----------------------------------

ನೋಂದಣಿ ಐಡಿ : KPFS2-8746

0
Votes
106
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top