ಚುಕ್ಕಿಯಂತೆ ಹೊಳೆಯಬಾರದೆ
ರಚನೆ : ಚೆನ್ನಬಸವ ತಡಕಲ್
----------------------------------
ಬೆಂದ ಅಗಳಿಗೆ ಒಂದಗಳು ಸಾಲದೆ ನೊಂದ ಗಳಿಗೆ ಮರೆತು ಒಂದಾಗಬಾರದೆ ಭೋಗದ ಭೋಗ ತೊರೆದು ತ್ಯಾಗದೊಳಗೆ ತ್ಯಾಗ ಮೆರೆದು ರಾಗ ದ್ವೇಷ ತೊರೆದು ಅನುರಾಗ ನೀಡಬಾರದೆ ಜೋಳಿಗೆಯ ಜೋಗಿಯಾಗಿ ಮೌನದೊಳಗೆ ಯೋಗಿಯಾಗಿ ಜೀವ ಜೀವ ತಾಗಿ ಸಾಗಿ ಮುಂದೆ ನಡೆಯಬಾರದೆ ಅಡಿಯ ಕಿತ್ತಿ ಮುಡಿಸಿ ಬತ್ತಿ ಪ್ರೀತಿ ಮಾತ ನುಡಿಯಬಾರದೆ ಕಳೆಯ ನಡುವೆ ಬೆಳೆದು ಬೆಳೆಯ ಚುಕ್ಕಿಯಂತೆ ಹೊಳೆಯಬಾರದೆ
----------------------------------
ನೋಂದಣಿ ಐಡಿ : KPFS2-8740