Submission 5278

ಇನ್ನೊಮ್ಮೆ ಮಗುವಾಗುವ ಆಸೆ!

ರಚನೆ : ಮಹದೇವಸ್ವಾಮಿ

----------------------------------

ಇನ್ನೊಮ್ಮೆ ಮಗುವಾಗುವ ಆಸೆ ಅವ್ವನ ಮಡಿಲಲ್ಲಿ ಅಪ್ಪನ ಹೆಗಲಲ್ಲಿ ಮಗುವಾಗುವ ಆಸೆ! ಅಜ್ಜಿಯ ಕತೆ ಕೇಳುವಾಸೆ ಅಜ್ಜನ ಜೊತೆ ಆಡುವಾಸೆ ಮತ್ತೊಮ್ಮೆ ಮಗುವಾಗುವ ಆಸೆ!! ಚುಕ್ಕಿ ತಾರೆಗಳ ಚಂದ್ರಮನ ನೋಡುತ್ತಾ ಕೈತುತ್ತು ತಿನ್ನುವಾಸೆ ಬೊಗಸೆ ಕಂಗಳಲಿ ನೀಲಿ ಆಗಸವಾ ನೋಡುತ್ತ ಮಗುವಾಗುವ ಆಸೆ!! ಹಂಗಿಲ್ಲ ಅರಿವಿಲ್ಲ ಜಾತಿ ಪಂಥದ ಅಮಲಿಲ್ಲ ಮೇಲು ಕೀಳು ಗೊತ್ತಿಲ್ಲ ತಾನೆಂದು ತನಗರಿವಿಲ್ಲ ಮತ್ತೊಮ್ಮೆ ಬಂದು ಬಿಡು ಬಾಲ್ಯವೆ ನಾ ಮಗುವಾಗುವ ಆಸೆ ಮಗುವಾಗುವ ಆಸೆ!.

----------------------------------

ನೋಂದಣಿ ಐಡಿ : KPFS2-8739

0
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top