ಕತ್ತಲಲ್ಲಿ ಮರೆಯಾದ ಹೊಳಪು
ರಚನೆ : ಚೇತನ ಕುಮಾರಿ
----------------------------------
ಕತ್ತಲೆಯಲ್ಲಿರುವ ಮಾಣಿಕ್ಯವೂ ಸಹ ಕಪ್ಪಾಗಿಯೇ ಕಾಣುತ್ತದೆ; ಆದರೆ ಅದು ಮೌಲ್ಯ ಕಳೆದುಕೊಂಡಂತಲ್ಲ. ಜೀವನದಲ್ಲಿಯೂ ಹೀಗೇ.. ಬೆಳಕು ಇಲ್ಲದ ಕ್ಷಣಗಳು ನಮ್ಮ ಹೊಳಪನ್ನೇ ಮಣ್ಣುಪಾಲು ಮಾಡಿದಂತೆ ತೋರುತ್ತವೆ. ಆದರೆ ತಾಳ್ಮೆ ತೋರಿದವರು ಮಾತ್ರ ಬೆಳಕಿನ ನಿಜವಾದ ಕೀರ್ತಿಯನ್ನು ಕಾಣುತ್ತಾರೆ. ಹೀಗಾಗಿ, ಸುಲಭವಾಗಿ ಸಿಗುವ ಕತ್ತಲೆಯತ್ತ ಓಡಬೇಡ; ದೂರದಲ್ಲಿದ್ದರೂ ಬೆಳಕು ನಿನ್ನ ಕಡೆ ಬರುತ್ತಿದೆ. ಮಾತಿಗೆ ಬಲ ಕೊಡಬೇಡ, ಕೆಲಸಕ್ಕೆ ಬಲ ಕೊಡು.
----------------------------------
ನೋಂದಣಿ ಐಡಿ : KPFS2-8730