Submission 5262

ಸುಮ್ಮನಾದಳು

ರಚನೆ : ಹೃತಿಕ್ ಜಯಣ್ಣ

----------------------------------

ಕತ್ತಲೆ ಲೋಕದಲ್ಲಿ ಮಿಂಚುಳದ ಹಾಗೆ ಬೆಳಗಿದವಳ ಕಣ್ಣಲೇಕೋ ಇಂದು ಕಂಬನಿ ಜೊತೆಯಾಗಿ ಬಂದ ಜೀವ ತೊರೆವುದೆಂದು ಅಂಜಿದಳೇನೋ ದೂರಾದರೆಲ್ಲಿ ಮರೆತು ನಂಟು ಕರಗುವುದೆಂದು ಬೆಚ್ಚಿದಳೇನೋ ಕರೆದಾಗಲೆಲ್ಲ ಓಡಿ ಒಡನಾಡಿಯಾಗಿ ಜೊತೆಗೂಡಿ ಕಳೆದೆಲ್ಲಾ ಕಾಲವ ಲೆಕ್ಕವಿಡುತ ಕುಳಿತವಳ ಧ್ವನಿಯಿಂದು ಗದ್ಗದಿತ ಮಾತನಾಡಿದರೆಲ್ಲಿ ಕಂಬನಿ ಕಟ್ಟೆಯೊಡೆವುದೆಂದು ನಿಶ್ಯಬ್ಧಳಾದಳವಳು ಮನದಲ್ಲಿ ಅಳುತ್ತ

----------------------------------

ನೋಂದಣಿ ಐಡಿ : KPFS2-8729

12
Votes
148
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top