ಅಮ್ಮ
ರಚನೆ : ವಾಣಿಶ್ರೀ ಬಸವರಾಜ ಹಳ್ಳದ
----------------------------------
ನನ್ನ ಮೊದಲ ಕೂಗು ನೀ ನನ್ನ ಮನಸ್ಸಿನ ಪ್ರತಿಧ್ವನಿ ನೀ ನನ್ನ ಭಾವಗಳ ಏರಿಳಿತ ನೀ ನನ್ನ ಹಡೆದವ್ವ ನೀ.... ಪ್ರೀತಿಗೆ ಕಡಲು ನೀ ಕಣ್ಣೀರು ಒರೆಸುವ ಮಡಿಲು ನೀ ನನ್ನ ಬಾಳಿನ ಶೃತಿ ನೀ ಸವಾಲುಗಳನ್ನು ಎದುರಿಸಲು ಕಲಿಸಿದ ಧೃತಿ ನೀ ನನ್ನ ಮನದ ಒಡತಿ ನೀ.... ಸಂಸ್ಕಾರದ ಮಳೆಯನ್ನು ಸುರಿಸುವ ಕಾರ್ಮೋಡ ನೀ ಕಗ್ಗತ್ತಲಿನಲ್ಲೂ ಬೆಳಕು ಚೆಲ್ಲುವ ಕಂದೀಲು ನೀ ನನ್ನ ಬಾಳ ಗೋಪುರದ ಕಳಶ ನೀ ವರ್ಣಿಸಲು ಸಾಲದ ಪದಗಳ ಪುಂಜ ನೀ ಕನಸಲ್ಲೂ ಕಲ್ಮಶವಿಲ್ಲದ ಕಣ್ಮಣಿ ನೀ....
----------------------------------
ನೋಂದಣಿ ಐಡಿ : KPFS2-8727