Submission 5256

ಗಿಡಮರಗಳ ತಿಮ್ಮಕ್ಕ

ರಚನೆ : ಅಮನ್ ನದಾಫ್

----------------------------------

ನಾಟಿದ ಮರಗಳಲ್ಲಿ ನೀನು ಹಾಡಿದ ಪವಿತ್ರ ಗಾನ ಮಳೆಯಾಗಿ,ಸೂರ್ಯನಾಗಿ ಮರಗಳನ್ನು ನೀಪಾಲಿಸಿದೆ ನಿಸ್ವಾರ್ಥ ಪ್ರೀತಿಗೆ ಜಗವೇ ಇಂದು ನಮಸ್ಕರಿಸಿದೆ ಗಂಡಿಲ್ಲದ ಬದುಕಿಗೆ ಗಿಡಗಳು ನಿಮಗೆ ಸಂತಾನ, ಹಸಿರು ತಾಯ್ತನದಲ್ಲಿ ಮಿಂಚಿತು ಸೇವಾ ಪರಂಪರೆ ಕರುಣೆಯ ಹಾದಿಯಲ್ಲಿ ನಡೆಯುವ ಜ್ಯೋತಿ ನೀನು ನಿನ್ನ ನೆರಳಲ್ಲಿ ಬೆಳೆದವು ಎನಿಸಲಾಗದ ಜೀವಗಳು ಮರುಳು ಗೊಳಿಸುವ ಹಸಿರು ಕನಸುಗಳ ದಾರಿಗಳು ಜಗದ ಮನಸ್ಸು ಗೆದ್ದ ನಿನ್ನ ದಿಟ್ಟ ನಡಿಗೆ, ಮರವೆಂದರೆ ಮಗ ಮಣ್ಣೆಂದರೆ ಮನಸು ಎಂದು ಮರಗಳ ಮದ್ಯೆ ಮಕ್ಕಳಂತೆ ಬೆಳಸಿದ ಮರಗಳನ್ನು ಮಕ್ಕಳ ದಿನಾಚರಣೆಯ ದಿನದಂದು ಮರವೇ ಮಗು ಎಂಬ ಮಮತೆಯಲ್ಲಿ ಮೌಲ್ಯ ತುಂಬಿದ ಹಸಿರು ತಾಯಿ ಮರೆಯಾಗಿ ಹೋದರು ತಾಯಿ ತಿಮ್ಮಕ್ಕ.

----------------------------------

ನೋಂದಣಿ ಐಡಿ : KPFS2-8726

2
Votes
116
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top