ನಾ... ಬರುವ ಮುನ್ನ
ರಚನೆ : ದಿವ್ಯಶ್ರೀ ಜೆ
----------------------------------
ಬರುವ ದಾರಿ ಕಲ್ಲಾಗಿದೆ, ಬರುವ ಬಯಕೆ ಹೆಚ್ಚಾಗಿದೆ. ಬಡತನದ ಬಾಗಿಲು ಬಿಗಿಯಾಗಿದೆ, ಕಂಡ ಕನಸು ಹೊಸದಾಗಿದೆ. ಹಸಿವು ಬಂದು ನೋವ ಕಚ್ಚಿದೆ, ಜನರ ಮಾತು ಗಾಳಿಯಂತಿದೆ. ಮನದ ಜ್ವಾಲೆ ಕುಟುಕುತ್ತಿದೆ, ಆದರೂ ಧೈರ್ಯ ದಾರಿ ತೋರುತ್ತಿದೆ. ಈ ಕತ್ತಲ ಪಾಠ ಗಾಯಗಳಿಗೆ ಗೂಟ, ಬಿದ್ದರೂ ನಿಲ್ಲುವ ಮನದೊಂದು ಪಾಠ. ಬಂದರೂ ಮರೆಯಲಾರೆ, ನಾನು ಪಟ್ಟ ಈ ತೊಳಲಾಟ...
----------------------------------
ನೋಂದಣಿ ಐಡಿ : KPFS2-8714