Submission 5220

ಕಣ್ಣ ಹನಿ

ರಚನೆ : ಮೇದಿನಿ ಎನ್ ಡಿ

----------------------------------

ಕಣ್ಣ ಹನಿಯೊಂದು ಕೇಳಿತು, ನಾ ಬರಲೇನೇ ಹೊರಗೆ? ಭಾರವಾಗಿದೆ ತನು-ಮನ ನನಸಾಗದ ಕನಸಿಗೆ. ಹೇಳಿಬಿಡು ನನ್ನ ಸಂತೈಸಬಾರದೆಂದು ನಿನ್ನ ಬೆರಳುಗಳಿಗೆ, ತಾಕಿಸದಿರು ನನ್ನ ನಿನ್ನ ಸೆರಗಿನ ಅಂಚಿಗೆ. ನೀ ಬೇಡವೆಂದರೂ ನಾ ಬರುವೆ ತಡೆಯಲಾರೆನು ಅರೆಘಳಿಗೆ. ಅದಕ್ಕೆ ನಾ ಓಲೈಸಿದೆ, ಸ್ವಲ್ಪ ಹೊತ್ತು ಜಾರದಿರು ಕೆಳಗೆ ನಾನೇ ಕರೆಯುವೆ ನಿನ್ನ ನಾ ಒಂಟಿಯಾಗಿರುವ ಆ ವೇಳೆಗೆ..

----------------------------------

ನೋಂದಣಿ ಐಡಿ : KPFS2-8699

11
Votes
116
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top