ಏಕೆ ಇವರೆಲ್ಲ ಹೀಗೆ
ರಚನೆ : ಅಮು ಭಾವಜೀವಿ ಮುಸ್ಟೂರು
----------------------------------
ಏಕೆ ಇವರೆಲ್ಲ ಹೀಗೆ ನಾನೆಂದರೆ ಈ ಅಸಡ್ಡೆ ಏಕೆ ಹೆಜ್ಜೆ ಹೆಜ್ಜೆಗೂ ಅವಮಾನಿಸುವರು ಅಕ್ಕರೆ ತೋರದೆ ದೂರವಿಡುವರು ಮನುಷ್ಯರಾಗಿ ಹುಟ್ಟಿಲ್ಲವೇ ನಾವು ಬಡವರಿಗೆ ಬದುಕುವ ಹಕ್ಕಿಲ್ಲವೇ ಅವರೇನು ದುಡಿದು ನಮಗೆ ಕೊಡಲ್ಲ ಅದು ನಮಗೂ ಬೇಕಾಗಿಲ್ಲ ನಮ್ಮ ಗಂಜಿಯೇ ನಮಗೆ ಮೃಷ್ಟಾನ್ನ ಅದನು ಗಳಿಸುವ ರಟ್ಟೆಯಿನ್ನು ಗಟ್ಟಿಯಿದೆಲ್ಲ ಐಷಾರಾಮಿ ಜೀವನ ನಮಗಿಲ್ಲದಿರಬಹುದು ಸ್ವಾಭಿಮಾನದ ಬದುಕು ನಮ್ಮದು ಯಾರೇ ಕೈಬಿಟ್ಟು ತುಳಿಯಲೆತ್ನಿಸಿದರೂ ಗರಿಕೆಯಂತೆ ಚಿಗುರುವ ಛಲವು ನಮ್ಮೊಳಗಿದೆ
----------------------------------
ನೋಂದಣಿ ಐಡಿ : KPFS2-8689