ಅವಳು ಅಬಲೆಯಲ್ಲ
ರಚನೆ : ದೀಕ್ಷಾ ಹೆಚ್ ವಿ
----------------------------------
ಕಣ್ಣಿಗೆ ಕಂಡಷ್ಟು ದುರ್ಬಲೆಯಲ್ಲ ಅವಳು, ಸಮಾಜದ ಮಾತುಗಳಿಗೆ ತಲೆಬಾಗಿದ್ದಳಷ್ಟೇ. ನಾಲ್ಕು ಜನರ ನಾಲ್ಕು ಮಾತಿಗೆ ತಲೆಕೆಡಿಸಿಕೊಳ್ಳುವವಳಲ್ಲ ಅವಳು, ಹೆತ್ತವರ ಮರ್ಯಾದೆ ಉಳಿಸಬೇಕಿತ್ತಷ್ಟೇ. ಮುಟ್ಟಿನ ನೋವಿಗೆ ಮನದಲ್ಲೇ ಚೀರುತ್ತಿದ್ದವಳು, ಹಾಗಂತ ತಾಳ್ಮೆ ಕಳೆದುಕೊಂಡವಳಲ್ಲ ಅವಳು. ಪಾರ್ವತಿಯ ಮಹಾಸ್ವರೂಪ ಅವಳು, ದುರ್ಗೆಯ ಪ್ರತಿರೂಪವಾಗಿಯೂ ಅನ್ಯಾಯದ ವಿರುದ್ಧ ಸಿಡಿದೇಳುವಳು. ಒಂಬತ್ತು ತಿಂಗಳು ಮಗುವನ್ನು ಹೊತ್ತು ಹೆರುವವಳವಳು, ಬರಡು ಭೂಮಿಯನ್ನೂ ಬಂಗಾರವಾಗಿಸುವ ಹೆಣ್ಣವಳು. ಅವಳು ಅಬಲೆಯಲ್ಲ, ಅವಳನ್ನು ದುರ್ಬಲಳಂತೆ ಕಾಣುವ ಕಣ್ಗಳು ದುರ್ಬಲವಷ್ಟೇ...
----------------------------------
ನೋಂದಣಿ ಐಡಿ : KPFS2-8688