ಆಕಾಶದೊಡೆಯ ಅಪ್ಪನೆಂಬಾತ
ರಚನೆ : ಪಾಮಣ್ಣ. ಎಚ್
----------------------------------
ಕಷ್ಟದಲಿದ್ದರು ಬುತ್ತಿ ತಂದಾತ ಹಸಿವಿನಲ್ಲಿದ್ದರು ನಕ್ಕು ನಲಿದಾತ ಮಕ್ಕಳ ಸುಖಕ್ಕಾಗಿ ಜೀವ ತೇದಾತ ಹರುಕು ಬಟ್ಟೆಯಲಿ ಸುಕವ ಕಂಡಾತ ಆತನೇ ಈ ಜೀವ ಕೊಟ್ಟ ಅಪ್ಪನೆಂಬಾತ.... ಮನೆಯ ಕಂಬಕ್ಕೆ ಹೆಗಲ ಕೊಟ್ಟಾತ ತುತ್ತ ನೀಡಿದ ತುತ್ತಿನ ಮನದಾತ ಅಗಲೆಲ್ಲ ದುಡಿದ ನಡುವ ಬಗ್ಗಿಸಿದಾತ ರಾತ್ರಿ ಮಲಗಿ ಕನಸು ಕಟ್ಟಿದಾತ ಆತನೇ ಈ ಜೀವ ಕೊಟ್ಟ ಅಪ್ಪನೆಂಬಾತ.... ಜೀವಕ್ಕೆ ಜೀವನ ತುಂಬಿದಾತ ಎಂದಿಗೂ ಕಷ್ಟವ ಹೇಳದ ನಂದಾದಾತ ಸಹಿಸದ ನೋವು ಕಂಡರು ನೋವಿಲ್ಲದಾತ ಸದಾ ತನಗಲ್ಲದಿದ್ದರು ಮಮಕಾರಕ್ಕೆ ಜೀವವಿಟ್ಟಾತ ಆತನೇ ಈ ಜೀವ ಕೊಟ್ಟ ಅಪ್ಪನೆಂಬಾತ....
----------------------------------
ನೋಂದಣಿ ಐಡಿ : KPFS2-8654