ಸ್ನೇಹದ ಕಡಲು
ರಚನೆ : ಅಕ್ಷಯ್ ಎಚ್ ಬಿ
----------------------------------
ಐದು ವರ್ಷಗಳ ನಮ್ಮ ಹಾದಿಗೆ, ನಮ್ಮಿಬ್ಬರ ಹೃದಯವೇ ನಾಂದಿ. ನಮ್ಮಿಬ್ಬರ ಬಂಧಕ್ಕೆ ಇರಲಿ ಶಾಶ್ವತ ಹುರುಪು, ನಮ್ಮ ಹೃದಯಗಳಲ್ಲಿ ಉಳಿಯಲಿ ಆ ಸಿಹಿಯಾದ ನೆನಪು ನಂಬಿಕೆಯ ಹೊಳೆ, ಹರ್ಷದ ಮಳೆ, ನಮ್ಮಿಬ್ಬರಲ್ಲಿ ತಂದಿದೆ ಕನಸುಗಳ ಹೊಳೆ. ನಮ್ಮಿಬ್ಬರ ನಂಟು ನದಿಯ ಹರಿವು, ನಮ್ಮಿಬ್ಬರ ನಂಬಿಕೆಯಲ್ಲೂ ಮೂಡಿದೆ ಶಾಂತಿಯ ತರುವು. ಪ್ರೀತಿಯ ಸ್ಪರ್ಶ, ಕಾಳಜಿಯ ನೆರಳು, ನಮ್ಮಿಬ್ಬರಲಿ ಮೂಡಿದ ದಿನನಿತ್ಯದ ಭರವಸೆಯ ಬೆಳಕು.
----------------------------------
ನೋಂದಣಿ ಐಡಿ : KPFS2-8616