ಗೆಲುವು
ರಚನೆ : ಲೀಲಾಮೃತ ಶ್ರೀ. ಎಂ
----------------------------------
ಅಧ್ಯಯನಿಸಿದೆ ಬಿಡದೆ ಒಂದು ಪುಟ ಗೆಲುವಿನ ಆಲೋಚನೆಗಳ ಓಟ ಪ್ರತಿಸ್ಪರ್ಧಿಗಳೊಡನೆ ಹೋರಾಟ ಗೆದ್ದಾಗ ಹಕ್ಕಿಯಂತೆ ಹಾರಾಟ. ಜೀವನದ ಪಾಠ ಕಲಿಸುವುದು ಕೆಲ ಸಮಯ ಗಮನವಿಟ್ಟು ಆಲಿಸು ನೀ ಪ್ರತಿ ವಿಷಯ ಕೆಟ್ಟ ಮನುಜರಿಗೆ ಹೇಳು ನೀ ವಿದಾಯ ಸಾಗುವ ದಾರಿಯಲ್ಲಿ ಭೋದಿಸಿತು ವಿಜಯ. ಅಣುಕಿಸಿ ಮಾತನಾಡಿಸುವರು ಚುಚ್ಚು ಅದ ಕಂಡು ಮನಸಿನಲ್ಲಿತು ಕಿಚ್ಚು ಗುರಿ ತಲುಪಲು ಪ್ರಯತ್ನಿಸಿದೆ ಹೆಚ್ಚು ಗೆದ್ದ ನಂತರ ಎಲ್ಲರಿಗಾದೆ ಅಚ್ಚು-ಮೆಚ್ಚು. ಸಾಧಿಸಲು ವಿಷಯಗಳಿವೆ ಇನ್ನು ಹಲವು ಶ್ರಮಿಸಿದರೆ ಖoಡಿತವಾಗಿ ಸಿಗುವುದು ಗೆಲುವು.
----------------------------------
ನೋಂದಣಿ ಐಡಿ : KPFS2-8580