Submission 5052

ಪ್ರೇರಣೆ

ರಚನೆ : ಮುನಿರಾಜು ಜಿ. ಬಿ

----------------------------------

ಹಿಡಿದೊಂದು ಛಲವ ಬಿಡದೆ ಸಾಗುತ್ತಿರು ನೀ, ನಿನ್ನ ಸಾಧನೆಯ ಗರಿ ಮುಡಿಗೇರುವಂತೆ, ನಿನ್ನ ನೋಡಿ ನಕ್ಕ ಜನರೆಲ್ಲಾ ಕೆಟ್ಟು; ಹೊಟ್ಟೆಕಿಚ್ಚು ಪಡುವಂತೆ. ಉಜ್ವಲವಾದ ಭವಿಷ್ಯವೊಂದು ನಿನಗಾಗಿ ಕಾದಿದೆಯಂತೆ, ಹಾಗೆಂದು ಬರೆದು ನನ್ನೊಡನೆ ಕಳಿಸಿಹನಾದೇವ; ನಾ ನಿನ್ನ ಸಹಚರನಂತೆ, ಆ ದೇವನ ನೆನೆದು ಜಪಿಸಿದರೆ ನೀ; ನಗು, ನಗು, ನಗುವೆಂಬ ಮಂತ್ರವ; ನಗುವೆಲ್ಲಾ ನಿನದಾಗಿ, ನೋವೆಲ್ಲಾ ದೂರಾಗಿ, ಕನಸೆಲ್ಲ ನನಸಾಗಿ, ಮನಪೂರ್ತಿ ಖುಷಿಯಾಗಿರುವೆಯಂತೆ ನೀ, ಆ ದೇವನಲ್ಲಿ ಶರಣಾಗಿ.

----------------------------------

ನೋಂದಣಿ ಐಡಿ : KPFS2-8566

4
Votes
146
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top