ಒಗ್ಗಟ್ಟಿನ ನಕ್ಷತ್ರಗಳ ಕನಸು
ರಚನೆ : ಯೋಗೀಶ್ ಆರ್
----------------------------------
ಒಗ್ಗಟ್ಟಿನ ನಕ್ಷತ್ರಗಳ ಕುಟುಂಬ, ಕ್ಷಣದ ಕಾರ್ಮೋಡ ಕವಿದು ಹೋದರೂ, ಮಿನುಗುವ ನಕ್ಷತ್ರಗಳ ಮಿನುಗು ಕಮ್ಮಿಯಾದರೂ, ಅದು ಮುಗಿಯದ ಸಂಬಂಧವೋ? ಕಣ್ಮುಂದೆ ಬಂದು, ಮರೆಯಾಗಿದೆಯೋ? ಪುಟ್ಟ ಕಾಲದಲ್ಲಿ ಆರಂಭವಾದ ಸಂಬಂಧ, ಕೊನೆಯಿಲ್ಲದ ಸವಿ ನೆನಪುಗಳ ಸಾಗರ, ಅದರ ಭಾಷ್ಪ ಕಣ್ಣು ಕೆನ್ನೆ ಅಂಚಿನಲ್ಲಿ, ಮಳೆ ಹನಿಯಾಗಿ ಜಿನುಗುತ್ತದೆ ಸೋಮಾರಿ ರಾತ್ರಿ! ಆದರೂ, ಸುಂದರ ರಾತ್ರಿಯಲ್ಲಿ ಬೆಚ್ಚಗಿನ ಹಾಸಿಗೆಯಲ್ಲಿ, ಸುಂದರ ಕನಸು ಕನಸಾಗಿ ಬರುವಾಗ, ಆ ಕನಸು ನಿಜವಾಗಬೇಕೆಂದರೆ? ಕಠಿಣ ಶ್ರಮವೇ ಅದರ ಮಾರ್ಗ! ಕಂಡ ಕನಸು ನಿಜವಾಗುವುದು ಶ್ರಮವಿಲ್ಲದೆ ಹೇಗೆ ಸಾಧ್ಯ? ಮಿನುಗುವ ನಕ್ಷತ್ರಗಳಂತೆ ನಮ್ಮ ಕನಸುಗಳು ಹಾರಲಿ ಆಕಾಶದಲ್ಲಿ!
----------------------------------
ನೋಂದಣಿ ಐಡಿ : KPFS2-8538