ಕೊಳದ ತಾವರೆಯ ಆಳಲು
ರಚನೆ : ಮನು ಕೆ. ಎಂ
----------------------------------
ಹಚ್ಚಸಿರ ತಿಳಿ ಕೊಳದ ತಾವರೆಯೂ ತನ್ನೋಡಲ ಪ್ರೇಮ ವೇದನೆಯಿಂದ ನರಳುತ್ತಿತ್ತು... ಕಾರ್ಮೂಗಿಲ ನಡುವೆ ಮರೆಯಾದ ರವಿ ಕಂಡು ಮನದಲ್ಲೆ ನೊಂದು ಶೋಧಿಸುತ್ತಿತ್ತು.. ತಣ್ಣನೆ ಬೀಸುವ ಗಾಳಿಯ ಕೇಳಿ ಕಂಡೆಯಾ ದಿನಮಣಿಯಾ ಕಂಡೆಯಾ ದಿನಕರ ನಾ ಎಂದು ಭವಣಿಸುತ್ತಿತ್ತು... ತಿಳಿಕೊಳದ ನಡ ನಡುವೆ ಒಂದೇ ಕಣ್ಣಿರಿಡುತ್ತಿತ್ತು... ಇದ ನೋಡಿದ ಮುಗಿಲು ಮನಕರಗಿ ಭಾವದಿಂ ಅಳುತ್ತಿತ್ತು. ಮಳೆ ನೀರಾ ಬಿಂದು ರವಿಯಾಗಿ ನೀ ಬಂದು .. ಹೊಸ ಭಾವ ಹೊಸ ಬಯಕೆಯ ನೀ ತಂದು.. ಹೇ ನೀರಾ ಬಿಂದು...ಅಳುತ್ತಿದ್ದ ತಾವರೆಗೆ ಚುಂಬಿಸಿದೆ ಇಂದು... ತಾವರೆಯ ತಬ್ಬಿ ನರ್ತಿಸಿದೆ ಇಂದು... ನಾ ನಾದೆ ತಾವರೆಯೂ ಇಂದು ನೀನಾದೆ ನೀರು ಬಿಂದು...
----------------------------------
ನೋಂದಣಿ ಐಡಿ : KPFS2-8482