Submission 4908

ಬಾಂಧವ್ಯದ ಅರಿವು

ರಚನೆ : ಸುಪ್ರಿಯಾ ಅಭಿಜಿತ್

----------------------------------

ಹೊರಟಿಹನು ಮಾನವ ದುರಾಸೆಯ ಪಥದಲ್ಲಿ ಸಂಬಂಧಗಳನ್ನು ಕಳಚಿಕೊಂಡು ಹೊರಟಿಹನು ದುಡ್ಡಿನ ಆಸೆಯಲ್ಲಿ ಜೊತೆಮಾಡಿಕೊಂಡಿಹನು ದ್ವೇಷ ಮತ್ತು ಅಸೂಯೆಗಳನ್ನು ದಾಟಲು ಮೋಹದ ಆ ಕ್ರೂರ ಬಲೆಯನ್ನು ಮನೆ ಮಕ್ಕಳು ಎಂದೂ ಅವನಿಗೆ ಕಾಣಿಸಲಿಲ್ಲ ಕಾಣಿಸಿತು ಬರೀ ಆ ನೋಟಿನ ಕಂತೆಗಳು ಬಿದ್ದು ಹೋಗಲಿ ಈ ಇಡೀ ಜಗತ್ತೆ ಸಹ ಆದರೂ ಅವನಿಗೆ ಕಾಣಿಸುವುದು ಬರಿ ದುಡ್ಡಿನ ಮಹಲುಗಳು. "ದುಡ್ಡೇ ದೊಡ್ಡಪ್ಪ" ಎಂದು ನಂಬಿದನು ಕೊಡುವುದು ಈ ಹಣ ಖುಷಿ ಸಂಪತ್ತು ಎಂದು ತಿಳಿದನು ಅರಿಯದಾದನು ಸಂಬಂಧಗಳ ಮಹತ್ವವನ್ನು. ಅರಿತನು ತಡವಾಗಿ ಸಂಬಂಧಗಳ ಅರ್ಥವನು ಆದರೆ ಕಳೆದುಕೊಂದಿಹನು ಆ ಅಮೂಲ್ಯ ಸಮಯವನ್ನು ತಿರಸ್ಕರಿಸಿದರು ಅವನನ್ನು ಮನೆ ಮಂದಿ ಎಲ್ಲರೂ ತಂದಿತು ದುಡ್ಡಿನ ಮೋಹವು ಅವನಿಗೆ ಈ ಸ್ಥಿತಿಯನ್ನು.

----------------------------------

ನೋಂದಣಿ ಐಡಿ : KPFS2-8454

117
Votes
872
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top