ಸ್ವರ್ಗದ ಅಪ್ಪ
ರಚನೆ : ಅನುಪಮಾ ಘೀರಡಿಮಠ್
----------------------------------
ಹೇಗಿರುವನು ಗೊತ್ತಾ ನನ್ನಪ್ಪ? ಬಡತನದ ಕುಲುಮೆಯಲಿ ಮುತ್ತಾಗಿ ಬೆಳೆದಿರುವನು ನನ್ನಪ್ಪ! ಅಕ್ಷರಙ್ಞಾನ ಪಸರಿಸುವ ಹೂವು ನನ್ನಪ್ಪ! ಪ್ರೇಮಸಿರಿಯನು ಧಾರೆಯೆರೆದ ಧಾರ ನನ್ನಪ್ಪ! ಇಂದ್ರಪುರಕೆ ಹೋಗಿರುವ ಚಂದ್ರ ನನ್ನಪ್ಪ! ದುಖಃದಲ್ಲಿ ಜೊತೆಗಾರ,ನಗುವಿನ ಮಾಯಗಾರ! ಬಿಟ್ಟೇ ಹೋಗಿರುವೆಂದು ರಂಪ ಮಾಡೋಲ್ಲ ಆದರೆ, ನಿನ್ನೊಂದಿಗೆ ಇನ್ನೂ ಸುಕಾಲವ ಕಳೆಯುವ ಇಂಗಿತ ನನ್ಗಿತ್ತು ಅಪ್ಪ! ಸಾಧನೆಗೆ ಬೆನ್ನುತಟ್ಟುವ,ಅಳುವಾಗ ರಮಿಸುವ ಕೈ ನಿನ್ನದೆಂದು ಭ್ರಮಿಸಿ ಖುಷಿಪಡುವೆನಪ್ಪ! ಇಹಋಣ ಮುಗಿದ ಕ್ಷಣ,ನಿನ್ನೆಡೆಗೆ ನನ್ನೀಪಯಣ! ಸ್ವರ್ಗದಪ್ಪನ ಅಪ್ಪಿ ಪ್ರೀತಿ ಬಯಸುವೆ, ಮತ್ತೆ ನಿನ್ನ ಮಡಿಲಲ್ಲಿ ಮಲಗುವೆ ಶಾಂತಚಿತ್ತದಿ ನಾನಪ್ಪ!
----------------------------------
ನೋಂದಣಿ ಐಡಿ : KPFS2-8435