ಹೆಣ್ಣೆ ಜೋಪಾನ!
ರಚನೆ : ರಚನ ಆರ್
----------------------------------
ಹೆಣ್ಣೆ ಜೋಪಾನ ಕಸಿವರು ನಿನ್ನ ಬಣ್ಣ, ಪೂಜಿಸುವರು ದುರ್ಗೆಯನ್ನು ದಿನ, ನಂತರ ಗೋಳಾಡಿಸಿ ರೋಧಿಸುವರು ನಿನ್ನ, ಕಾಮದ ಕಣ್ಣಿನಿಂದ ನೋಡುವರು ನಿನ್ನ, ನಂತರ ಹೇಳುವರು "ನಿನ್ನ ಜೋಪಾನದಲ್ಲಿದ್ದರೆ ಚೆನ್ನ", ಸೀರೆಯುಟ್ಟರು ದಾವಣಿ ತೊಟ್ಟರು ಅವರ ಬಯಕೆ ಆಗುವುದಿಲ್ಲ ಸಣ್ಣ, ತುಂಬಾ ಕಷ್ಟ ಮಾರಾಯ್ಯರೇ ನಡೆಸುವುದು ಹೆಣ್ಣಿನ ಜೀವನವನ್ನ, ಆದ್ರೆ ಯಾರು ಹೇಳುತ್ತಾರೆ ಜಗತ್ತಿಗೆ ಇವೆಲ್ಲವನ್ನ? ಬಳಸಿ ಬಿಸಾಡುವರು ಹೆಣ್ಣನ್ನ, ಆದರೆ ತಪ್ಪಿಸುವುದಿಲ್ಲ ನವರಾತ್ರಿ ಪೂಜೆಯನ್ನ, ಬರೀ ಆರತಿಗೆ ಕರೆಯುವರು ಹೆಣ್ಣೆ ನಿನ್ನನ್ನ, ಆದರೆ ಕಾಲಲ್ಲಿ ಒದೆಯುತ್ತಾರೆ ನ್ಯಾಯ ದೇವತೆಯನ್ನ, ತುಂಬಾ ಕಷ್ಟ ಮಾರಾಯರೇ ನಡೆಸುವುದು ಹೆಣ್ಣಿನ ಜೀವನ,
----------------------------------
ನೋಂದಣಿ ಐಡಿ : KPFS2-8434