ಕದವ ತೆರೆದ ಮನಸ್ಸು
ರಚನೆ : ತಿಪ್ಪೇಶ್ ಕೋಗುಂಡೆ ಬಿ ವಿ
----------------------------------
ಸೇರಬಹುದೇ ನಾವು ಭಾವದೊಳು ಮನಸೆಂಬ ಕಾವಲುಗಾರ ಕದವ ತೆರೆದೊಡೆ. ಹೋಗಬಹುದು ನಾವು ಭಾವದೊಳು ನಮ್ಮ ಭಾವನೆಗಳ ಕದವು ತೆರೆದೊಡೆ. ಭಾವನೆಗಳ ಒಳಮನೆಯ ಬಾಗಿಲೇ ಮನಸ್ಸು ತೆರೆದು ನೋಡಿದರೇ ಕಾಣುವುದು ಪ್ರತಿಮನಸ್ಸಿನ ಭಾವನೆಗಳು. ಇಲ್ಲಿ ಹೊರಮನೆಗೆ ಬಂದೋಗುವವರು ಸಹಜ ಒಳಮನೆಯ ಬಾಗಿಲು ತೆರೆಯುವನೇ ಮನುಜ. ಸೇರಲೇಬೇಕು ಭಾವದೊಳು, ತೆರೆದು ನೋಡಲೇಬೇಕು ಜಗದೊಳು.
----------------------------------
ನೋಂದಣಿ ಐಡಿ : KPFS2-8385