ಬೆಳೆಗಳ ಬೆಳೆದು ಬೆಳೆಯದ ರೈತ
ರಚನೆ : ಆನಂದ ಕಣವಿ
----------------------------------
ಮುಷ್ಟಿ ಅನ್ನವ ಬೆಳೆಯುದಕ ಗೇನು ಹೊಟ್ಟೆಯ ತುಂಬುವುದುಕ ನಸು ನಸಕಿನ್ಯಾಗ ಎದ್ದಾನ ಭೂಮಿ ಊಳಿಮೆಗೆ ನಡೆದಾನ ರಾತ್ರಿ ಹಗಲೆನ್ನದೆ ನೀರು ಉಣಿಶ್ಯಾನ ಚಂದದ ಬೆಳೆಗಳ ಬೆಳೆದಾನ ಮಾರುಕಟ್ಟೆಗೆ ಬೆಂಬಲ ಬೆಲೆ ಕೇಳ್ಯಾನ ಬೆಲೆ ಸಿಗದೆ ನಡು ಬೀದಿಯಲ್ಲಿ ನಿಂತಾನ ಸ್ವಾರ್ಥವಿಲ್ಲದೆ ಜಗಕ್ಕೆಲ್ಲಾ ಅನ್ನ ನಿಡ್ಯಾನ ತನ್ನ ಮನೆ ಬ್ಯಾಂಕಿನ್ಯಾಗ ಅಡವಿಟ್ಟಾನ ಸಾಲಗಾರನಾಗಿ, ಬಡವನಾಗಿ, ಹರಿದ ಅಂಗಿ ಲುಂಗಿಯಲ್ಲಿ ಬೆಳೆ ಬೆಳೆದು ಬೆಳೆಯದ ರೈತನಾಗ್ಯಾನ ರೈತನಾಗ್ಯಾನ...
----------------------------------
ನೋಂದಣಿ ಐಡಿ : KPFS2-8384