Submission 4769

ಪ್ರೇಮ

ರಚನೆ : ಬಿ.ಎಂ.ಪ್ರಮೀಳ ಮಹಾದೇವ್

----------------------------------

ಪ್ರೇಮವೆಂಬುದು ಕಾಮದ ಕಲ್ಪನೆಯಲ್ಲ ಭೋಗದ ಬಯಕೆಯಲ್ಲ.. ಪ್ರೇಮವೆಂದರೆ ದೈವಾನುಗ್ರಹದ ದೈನಿಕ ಸರ್ವರನ್ನು ಪೊರೆವ ಸೈನಿಕ ಸಿರಿತನ ಬಡತನಗಳ ಲೆಕ್ಕಿಸದೆ ಒಲವಿನೊರತೆಯನು ಉಕ್ಕಿಸುತ್ತದೆ ಬದುಕಿಗೆ ಭರವಸೆಯನು ಹೆಚ್ಚಿಸುತ್ತದೆ ಕಲ್ಲೆದೆಯನು ಕರಗಿಸುವುದೀ ಪ್ರೀತಿ ನಂಬಿದವರೆದೆಯಲಿ ನಿತ್ಯವೂ ಪರಂಜ್ಯೋತಿ ಈ ಪ್ರೀತಿ.. ಅಂತರಂಗದಲಿ ಭಾವನೆಗಳ ಬೆಸೆಯುತ್ತಾ ಪ್ರೀತಿಯ ಬಳ್ಳಿಗೆ ಪನ್ನೀರೆರೆಯುತ್ತಾ.. ಪರಿಪೂರ್ಣತೆಯೊಳಗೆ ಪಕ್ವವಾಗುವ ಪ್ರಕ್ರಿಯೆಯೇ.. ಪ್ರೀತಿ.. ಪ್ರೀತಿ ..ಪ್ರೀತಿ.

----------------------------------

ನೋಂದಣಿ ಐಡಿ : KPFS2-8361

985
Votes
4,133
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top