Submission 4727

ನಲ್ನುಡಿ

ರಚನೆ : ಸ್ವಾಮಿ ಟಿ ಎಸ್

----------------------------------

ಮನದ ಭಾವದ ದನಿಯು ಮುದದಿ ಹೇಳುತ್ತಲಿವುದು ಪದದಿ ತಾ ಪಸರಿಸುತ ಮೌನದ ಮಾತು, ತನುವ ಕಲ್ಮಷ ಹೊಡೆದು ತಿಳಿಯಾಗಿಸು ತೊಳೆದು ಅಜ್ಞಾನದಾ ಕಳೆಯ ಎಸೆ ನೀನು ಕಿತ್ತು, ದ್ವೇಷಾಸೂಹೆ ತೊಡೆದು ಪ್ರೀತಿಯಲಿ ಮುಳುಗೆದ್ದು ಶಾಂತಿಯನು ಪಾಲಿಸುತ ನಗುವ ಬಿತ್ತು, ಭವದ ಸಾರವ ತಿಳಿದು ಎಲ್ಲರೊಳು ನೀ ಬೆಸೆದು ಸವಿ ಸಂತಸದಿ ದಿನದ ಮೂರು ತುತ್ತು.

----------------------------------

ನೋಂದಣಿ ಐಡಿ : KPFS2-8324

1
Votes
101
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top