Submission 4656

ಕರುನಾಡ ಕರ್ನಾಟಕ

ರಚನೆ : ಹರ್ಷಿತಾ ಬಿ.ಕೆ

----------------------------------

ನಮ್ಮ ಹೆಮ್ಮೆಯ ನಾಡು ಕರ್ನಾಟಕ, ಕಲೆಗಳ ಬೀಡು — ನಮ್ಮ ಕರ್ನಾಟಕ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಧರೆಯಲಿ, ವೈವಿಧ್ಯತೆಯಲಿ ಏಕತೆಯನ್ನು ಕಾಣುವೆವು ಮನದಲಿ. ಗಂಗೆಯ ತೀರದಿಂದ ಹೊಯ್ಸಳರ ಶಿಲ್ಪದವರೆಗೂ, ಸಂಸ್ಕೃತಿಯ ಪ್ರತಿಬಿಂಬ ಹರಿಯುತಿದೆ ಇಲ್ಲಿಯವರೆಗೂ. ಪಂಪನ ಪದ್ಯದಲ್ಲಿ ಧರ್ಮದ ದೀಪ ಬೆಳಗಿತು, ದಾಸರ ನುಡಿಯಲಿ ಭಕ್ತಿ ಹರಿಯಿತು. ನಾಡಿನ ಹಿರಿಮೆಯನ್ನು ಹೆಚ್ಚಿಸಿದ ಜ್ಞಾನಪೀಠ ಪ್ರಶಸ್ತಿ, ಪ್ರತಿಯೊಬ್ಬ ಕನ್ನಡಿಗನಿಗದು ಮಹೋನ್ನತ ಆಸ್ತಿ. ಪೂಜೆಸೋಣ ನಮ್ಮ ಮಣ್ಣಿನ ಕಂಪನ್ನು ಪ್ರತಿಯೊಂದು ಯುಗದಲ್ಲೂ, ಪರಂಪರೆಯ ಕಾವಲಾಗಿ ಉಳಿಯೋಣ ಮುಂದಿನ ಪೀಳಿಗೆಯಲ್ಲೂ. ಚಿರಕಾಲ ಉಳಿಯಲಿ ನಮ್ಮ ಭವ್ಯ ಭಾಷೆ ಕನ್ನಡ, ಇದು ನಮ್ಮ ಕನ್ನಡ — ಇದೇ ನಮ್ಮ ಹೆಮ್ಮೆಯ ಕರ್ನಾಟಕ!

----------------------------------

ನೋಂದಣಿ ಐಡಿ : KPFS2-8271

5
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top