ಚಿಣ್ಣರಿಗೆ ಪುಸ್ತಕದ ಕಿವಿಮಾತು
ರಚನೆ : ಡಾ. ಅಶ್ವಿನಿ ಕೆ ಟಿ
----------------------------------
ನಾನು ಕೇವಲ ಕಾಗದವಲ್ಲ, ಇಣಿಕಿ ನೋಡು ನಿನ್ನ ಮಿತ್ರನಾಗಬಲ್ಲೆ, ಚಿತ್ರ - ಪದಗಳ ಜೊತೆಗಿನ ಬಾಂದವ್ಯ , ಹಾಸ್ಯ -ಸಾಹಸ, ಜಾನಪದದ ಲಹರಿ, ಕಥೆ - ಕವಿತೆಯ ರಸೋತ್ಸವ, ನೆನಪಾಗಿ ಹೃದಯಕೆ ಮುದ್ರಣವಾಗುತ್ತದೆ. ಟಿವಿ ನೋಡುವೆ, ಆದರೆ ಕ್ಷಣರ್ಥದ ಆನಂದ , ಚಾಟ್‌ಜಿಪಿಟಿ ಉತ್ತರಕೋಶವೇ ಸರಿ ಆದರೆ, ಪುಸ್ತಕ ಪ್ರಶ್ನೆಗಳೇ ಹುಟ್ಟಿಸುವ ಮಡಿಲು, ನಿನ್ನ ಕಲ್ಪನೆಗಳ ಲೋಕಕ್ಕೆ ,ಹೊತ್ತು ಸಾಗುವೆ, ಭಾವನೆಗಳ ತಾಳ ಮೇಳಕೆ ನಿಶ್ಯಬ್ದ ಸ್ನೇಹಿತ, ಒಮ್ಮೆ ಕೈಹಿಡಿದರೆ, ಬಿಡದ ನಂಟು.
----------------------------------
ನೋಂದಣಿ ಐಡಿ : KPFS2-8270