Submission 4636

ಸಾಂಗತ್ಯ

ರಚನೆ : ನಿಖಿಲೇಂದ್ರ ಜೆ ಎನ್

----------------------------------

ಸಾಗರದ ನೀರು ಉಪ್ಪುಪ್ಪಾದರೂ, ಆವಿಯಾಗಿ ಧರೆಗಿಳಿವ ಹನಿಗಳೇಕೆ ಸದಾ ಸಿಹಿ! ಸಂಸಾರದಿ ಸಮಸ್ಯೆಗಳ ಕತ್ತಲು ಆವರಿಸಿದರೂ, ಭರವಸೆಗಳ ಬೆಳಕ ಅರಸಿ ಭವಸಾಗರವ ದಾಟಬೇಕಲ್ಲವೇ, ಸಖಿ? ಕಡಲಿನ ಅಲೆಗಳು ಬಾರಿ-ಬಾರಿ ದಡವ ತಬ್ಬಿದರೂ, ತಣಿಯದೇಕೆ ಈ ತೀರದ ದಾಹ! ನಿನ್ನ ಕೋಪದ ಕಿಡಿ ಹೊತ್ತಿ ಉರಿವ ಬೆಂಕಿಯಾದರೂ, ಕರಗಲಾರದೇಕೆ ನಿನ್ನೆಡೆಗಿನ ಮೋಹ? ಮಾವು-ಬೇವು ಬಿತ್ತಿ ಬೆಳೆವ ಮಣ್ಣೊಂದಾದರೂ, ರುಚಿಗಳೇಕೆ ಬೇರೆ! ಎಲ್ಲೋ ಹುಟ್ಟಿ, ಬೆಳೆದು ಬಂದ ಹಾದಿ ಭಿನ್ನವಾದರೂ, ತಾಪ-ತಂಪಿನ ಸಮರಕೆ ಬೀಳದೇಕೆ ಸಾಮರಸ್ಯದ ತೆರೆ? ಸುಖ-ದುಃಖಗಳನು ಸಮನಾಗಿ ಸ್ವೀಕರಿಸಿದರೆ, ಬದುಕು ಬಂಗಾರ; ನೋವು-ನಲಿವಿನ ಶಾಶ್ವತ ಸಾಂಗತ್ಯದ ಒಲವೇ ಅದಕೆ ಸಿಂಗಾರ.

----------------------------------

ನೋಂದಣಿ ಐಡಿ : KPFS2-8257

12
Votes
203
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top