ಬದುಕು
ರಚನೆ : ರಮ್ಯ ಕೃಷ್ಣ ಪ್ರಭು
----------------------------------
ಬದುಕಿದು ಜಟಕಾ ಬಂಡಿಯು ತನ್ನಿಚ್ಚೆಯಂತೆ ಆಡಿಸುವುದು ವಿಧಿಯು ನಾವು ಅವನಾಡುವ ಚದುರಂಗದ ಕಾಯಿಯು ಬಂದದ್ದು ಬರಲಿ ಹೋದದ್ದು ಹೋಗಲಿ ಯಾವ ತ್ಯಾಗಕ್ಕೂ ಸದಾ ಮನವು ಸಿದ್ಧವಿರಲಿ ಸೋಲು ಗೆಲುವು ಸಹಜವು ಈ ಬಾಳಲಿ ಕಷ್ಟವೆಲ್ಲಾ ಇಷ್ಟವಾಗಿ ಬದುಕು ಸೊಗಸಾಗಲಿ ದ್ವೇಷ ಅಸೂಯೆ ಸಾಧಿಸದೆ ಬಾಳು ಚೆಂದವಿರಲಿ ಪ್ರೀತಿ ವಿಶ್ವಾಸ ನಂಬಿಕೆ ಕರುಣೆ ಜಗದಿ ಬಿತ್ತಲಿ ಅರಿತು ಬೆರೆತು ಜೀವನದಿ ಸಾಗಬೇಕು ಧೈರ್ಯ ಛಲದಿ ಮುನ್ನುಗುತ್ತ ಇರಬೇಕು ನಾಳೆ ನನ್ನದೆಂಬ ಭರವಸೆಯಿರಬೇಕು ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿಯಿರಲಿ ನಡೆಯುವ ನಡೆತೆಯಲಿ ನಯವಿನಯವಿರಲಿ ನುಡಿಯು ನುಡಿಯಲಿ ಜೀವನಪಾಠವು ಅಡಗಿರಲಿ
----------------------------------
ನೋಂದಣಿ ಐಡಿ : KPFS2-8255