ಹೆಮ್ಮೆಯ ಕನ್ನಡಿಗರು ನಾವು
ರಚನೆ : ವಿನಾಯಕ ಎನ್ ಹೆಚ್
----------------------------------
ನೂರು ಭಾಷೆಗಳ ಕಂಡರೂ ಸರಿ, ಒಂದು ಭಾಷೆಯ ಉಸಿರಾಗಿರೀ; ಕನ್ನಡದ ನಾದವೇ ಜೀವದ ಸ್ಪಂದನ, ನಾನು ಹೆಮ್ಮೆಯ ಕನ್ನಡಿಗ – ಅದೆ ನನ್ನ ಧ್ಯೇಯವನ! ಧರ್ಮದ ಹಾದಿಯಲಿ ನಡೆದರೂ ನೀನು, ಕನ್ನಡವ ಬೆಳಗಲಿ ನಿನ್ನ ಜೀವನ; ಜಾತಿಯ ಸಾರಿದರೂ ನೀ, ಕನ್ನಡದ ಗೌರವ ಮರೆಯದಿರು. ನೆಲೆಯ ನಂಟು ಉಳಿಸು ಮನದಲಿ, ಕೃತಜ್ಞತೆ ಹರಡು ಕರುನಾಡಿನ ನಾಡಲಿ; ಒಂದು ನುಡಿ, ಒಂದು ನಾದ – ಕನ್ನಡವೇ ನಮ್ಮ ಜೀವನದ ಸ್ವಾದ. ಇದುವೇ ನಮ್ಮ ನಾಡು, ಹೆಮ್ಮೆಯ ಕರುನಾಡು, ನಮ್ಮ ನಾಡಿನ ನಾದವೇ ಕನ್ನಡನಾಡು; ನೂರು ಭಾಷೆಗಳ ಕಂಡರೂ ಸರಿ, ಒಂದು ಭಾಷೆಯ ಉಸಿರಾಗಿರೀ..
----------------------------------
ನೋಂದಣಿ ಐಡಿ : KPFS2-8254