Submission 4604

ಅಂತರದ ದೀಪ

ರಚನೆ : ಸಂತೋಷ್ ಕಲ್ಲಪ್ಪ ಬೋಂಗಾಳೆ

----------------------------------

ನಿಜವಾದ ದೇವರನ್ನು ಹುಡುಕಲು ಪ್ರಯತ್ನ ಮಾಡಲಿಲ್ಲ, ಪಾರಂಪರ್ಯದ ಅಜ್ಞಾನಸೂತ್ರ ಕತ್ತರಿಸಲಿಲ್ಲ। ಅಂತರದಲ್ಲೇ ಸತ್ಯದೇವನಿದ್ದರೂ, ಅವನ ಗುರುತು ಕಾಣಿಸಲಿಲ್ಲ। ಲೌಕಿಕ ಲಜ್ಜೆ ಮತ್ತು ಭಯ ಮನದೊಳಗೆ ಬೇರೂರಿತ್ತು, ಭಕ್ತಿಯಿತ್ತು ಆದರೆ ವಿವೇಕವಿಲ್ಲ। ಅಂಧನಂಬಿಕೆಯ ದಾರಿಯಲ್ಲಿ ನಡೆದಾಗ, ಜ್ಞಾನಬೆಳಕು ಕಾಣಿಸಲಿಲ್ಲ। ದೇವಾಲಯ ಸಂಚರಿಸಿ ಶಾಂತಿ ಸಿಕ್ಕಲಿಲ್ಲ, ಕಲ್ಲಿನಲ್ಲಿ ದೇವರನ್ನು ಹುಡುಕಿದೆವು। ಅಂತರದ ಬೆಳಕು ಕಣ್ಣಿಗೆ ಕಾಣಲಿಲ್ಲ, ಜ್ಞಾನಸ್ಪರ್ಶವಾದಾಗ ಅರಿವಾಯಿತು। ನಿಜದೇವನು ಮೂರ್ತಿಯಲ್ಲಿ ಅಲ್ಲ, ಮನಶುದ್ಧಿಯಲ್ಲಿ ವಾಸಿಸುತ್ತಾನೆ। ಶುದ್ಧ ಭಕ್ತಿ ಮತ್ತು ವಿಶ್ವಾಸದಿಂದ ಅವನ ದೀಪ ಅಂತರದಲ್ಲಿ ಬೆಳಗುತ್ತಾನೆ

----------------------------------

ನೋಂದಣಿ ಐಡಿ : KPFS2-8237

27
Votes
255
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top