Submission 4600

ಭರವಸೆಯ ಬೆಳಕು

ರಚನೆ : ಅನನ್ಯ ಎಚ್ ಸುಬ್ರಹ್ಮಣ್ಯ

----------------------------------

ಬೆಳಕಿನ ಛಾಯೆಯಲ್ಲಿ ಚಿತ್ತಾರದ ದೀಪಾವಳಿ ಕತ್ತಲ ಬದಲಾಯಿಸುವ ಒಲವಿನ ದೀಪ ಮನೆಯಂಗಳದಿ ಪ್ರಜ್ವಲಿಸಲಿ ಕಿರಣದೋಕುಳಿ ನಿಷ್ಕಲ್ಮಶ ಮನದಿ ಬತ್ತಿಯ ಹಿಡಿಯೋಣ ಕಾಡದಿರಲಿ ಇರುಳು ನಮ್ಮೊಳು ಬೆಳಕಿನಡಿಯಲಿ ಅತಿರೇಕಕ್ಕೇರಿವ ನೋವುಗಳು ಕಳೆದುಹೋಗಲಿ ದೀಪವೇ ಹೊಳೆಯಲು ಖಾತರದಿ ನಿಂತಿದೆ ನಗು ಮೊಗದಿಂದ ಬೆಳಗಿಸಿ ಶೃಂಗಾರಿಸಬೇಕಿದೆ ಪರಿಸರ ಕಾಳಜಿಯೊಡನೆ ಬೆಳಕನ್ನು ಪ್ರಕಾಶಿಸುವ ಬಾನ ಚುಕ್ಕಿಗಳೇ ನಾಚುವಂತೆ ಹೊಳಪಿಸೋಣ ಮಣ್ಣಿನ ಹಣತೆಯೊಳು ಮುಂಬರುವ ಜೀವನಕೆ ಹೊಸತನದಿ ನಲಿಯುತ ಸ್ವಾಗತಿಸೋಣ ಯೋಚಿಸು ನೀನೊಮ್ಮೆ ನೀನೆ ಮಲಗಿದರೇ ನನ್ನೊಳಗಿನ ಕತ್ತಲ ಓಡಿಸುವವರ್ಯಾರೆಂದು.

----------------------------------

ನೋಂದಣಿ ಐಡಿ : KPFS2-8233

140
Votes
625
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top