Submission 4598

ಬಾಳಹಾಡು

ರಚನೆ : ದೀಪ್ತಿ.ಪಿ

----------------------------------

ಬಾಳ್ವೆ ಒಂದು ಕಿರಿದಾದ ದಾರಿ, ಸುಖ ದುಃಖಗಳ ರಂಗೋಲಿ ಸಾರಿ, ಹೊಸ ಬೆಳಕಿಗೆ ಕನಸುಗಳ ಕೂಗು, ಎದೆಯ ಭಾವನೆಗೆ ನಂಬಿಕೆಯೇ ತೂಗು। ಮಿಂಚು ಮಳೆಯಂತೆ ಕ್ಷಣಗಳು ಸಾಗಲು, ಅನುಭವ ನದಿ ಮೌನದಿ ಹರಿಯಲು, ಕಲಿಯುತಾ ಬೆಳೆಯುವ ನಲಿದು ಹತ್ತಿ, ಸಹನೆಯ ದೀಪವ ಬೆಸೆಯುವ ಬತ್ತಿ। ಸಮಯವೆ ಕಲಿಸಲು ಆಟ-ಪಾಠ, ದಣಿವಿನಲ್ಲಿಯೂ ಚಿಗುರಲಿ ಹಠ ಶ್ರಮದ ಬೀಜವೆ, ಫಲವೆ ಸಾಧನೆ ಬಾಳಲಿ ಇರಲಿ ಸುಗಂಧದ ಪಕಳೆ । ಪ್ರತಿ ಮೆಟ್ಟಿಲು ಗಟ್ಟಿಯಿರಲಿ ಪ್ರೀತಿ, ಒಲುಮೆಯ ಜೋಡಣೆಯಲಿ, ಜೀವನವದು ಸೊಗಸಾಗಿ ಚಿಗುರುಲಿ।

----------------------------------

ನೋಂದಣಿ ಐಡಿ : KPFS2-8232

8
Votes
160
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top