ಆ ಕ್ಷಣ
ರಚನೆ : ವಿಕ್ರಮ್ ಎಸ್
----------------------------------
ನಿನ್ನ ಕಂಡ ಆ ಕ್ಷಣ ನಿಜಕ್ಕೂ ಕಲ್ಪನೆಯ ಅಂಚಿನಾಚೆ ದಾಟಿದ ಅನುಭವ ನಿನ್ನ ನಗು ತಂದ ತಂಗಾಳಿಯ ಆ ತಂಗುದಾಣ ಕಾಗದವೇ ಕಾಲಿಯಾಗಿ ಗೋಡೆಗಳಲ್ಲಿ ಗೀಚಲು ಪ್ರಾರಂಭಿಸಿದೆ ನಿನ್ನ ಗುಣಗಾನವ ನೀ ಬರಲು ನನ್ನೆಡೆ, ಮರುಭೂಮಿಯಾಯ್ತು ಬೃಂದಾವನ ದಾಟಿ ಮುಂದೋಗಲು, ಶವಯಾತ್ರೆ ನನ್ನ ಮೊಗದಲಿ ಮಿತಿ ಇಲ್ಲದ ಮಿತಿಯೇ ನಿನ್ನ ಸೌಂದರ್ಯ, ಆ ಮಿತಿ ಮೀರಲು ಇನ್ನಾರು ಈ ಜಗದಲಿ ಜನುಮ ಜನುಮದಿನದಲೂ ನಿನ್ನ ಮಾತಿಗೆ ಕಾಯ್ದುಂತೆ ಮರೆತರು ಮರೆಯಲಾಗದ ಕನಸು, ನಿಂತರು ನಿಲ್ಲದ ಕಲ್ಪನೆ ನೀನೆ.. ನನ್ನ ಬದುಕಿನ ಸಾರ್ಥಕತೆಯೇ ನಿನ್ನ ಪರಿಚಯ ಒಲವೇ..ನೀ ಒಪ್ಪಿಕೋ ಒಪ್ಪದಿರು, ಒಲವನು, ಒಳಿತನು ನಾ ಸದಾ ಬಯಸುವೆ ಅನಂತದ ಅನಂತತೆಯವರೆಗೂ
----------------------------------
ನೋಂದಣಿ ಐಡಿ : KPFS2-8229