ನಲ್ಮೆಯ ಗೆಳೆಯ
ರಚನೆ : ಜಗದಂಬ ಪ್ರವೀಣ್ .ಕೆ.
----------------------------------
ನಲ್ಮೆಯ ಓ ಗೆಳೆಯನೇ, ನಿನ್ನ ಪ್ರೀತಿಗೆ ನಾ ಸೋತಿರುವೆ. ಎಲ್ಲೇ ಇರು ನೀ ಸುಖವಾಗಿರು, ಆದರೆ ನೀ ಯಾವಾಗಲೂ ನನ್ನ ಮನದಲ್ಲಿರು. ನಿನಗೊಂದು ಉಡುಗೊರೆ ತಂದಿರುವೆ, ನೀ ಎಲ್ಲಿ ಮರೆಯಾಗಿ ಹೋಗಿರುವೆ. ನಾ ಇಲ್ಲಿ ಕಾದು ಕುಳಿತಿರುವೆ, ಓ ಗೆಳೆಯ ಎಲ್ಲಿರುವೆ. ಮನದಲ್ಲಿ ಮನೆಮಾಡಿರುವೆ, ನಿನಗಾಗಿ ಚಡಪಡಿಸುತ್ತಿರುವೆ. ನನಗೆ ಅನಿಸುತ್ತಿದೆ, ನೀ ನನ್ನ ಹೃದಯದಲ್ಲೇ ಇರುವೆ. ಕಂದ
----------------------------------
ನೋಂದಣಿ ಐಡಿ : KPFS2-8222