Submission 4576

ನನ್ನ ಗುರುಗಳು

ರಚನೆ : ಭೀಮರಾವ್ ಭೂತಾಲೆ

----------------------------------

ನನ್ನ ಅಂತರಾಳದಲ್ಲಿ ಅಕ್ಷರವ ಇಳಿಸಿದವರು ಎನ್ನ ಮನದಂಗಳದಲ್ಲಿ ಪ್ರೀತಿಯ ಹೂ ನೆಟ್ಟವರು ನನ್ನ ಬಾಳತೋಟದಲ್ಲಿ ಕರುಣೆಯ ಬೆಳೆ ಬಿತ್ತಿದವರು ನನ್ನ ಗುರುಗಳು ಇವರು ನನ್ನ ಗುರುಗಳು ತಮ್ಮ ಸ್ಪಷ್ಟ ಮಾತಿನಲ್ಲಿ ಜೀವನ ಗುರಿ ತೋರಿದವರು ತಮ್ಮ ನೇರ ನಡೆಯಲ್ಲಿ ಪರಿಶ್ರಮದ ದಾರಿ ತಿಳಿಸಿದವರು ತಮ್ಮ ದಿವ್ಯಜ್ಞಾನದಲ್ಲಿ ನಮ್ಮೆಲ್ಲರನ್ನೂ ಮಿಂದೇಳಿಸಿದವರು ನನ್ನ ಗುರುಗಳು ಇವರು ನನ್ನ ಗುರುಗಳು ಪಾಠ ಪಠ್ಯ ಬೋಧನೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಿದವರು ಕಥೆ ಕವನ ವಾಚನದಲ್ಲಿ ಸೃಷ್ಟಿ ಸಾರ ಬೆಸೆದವರು ಪೂಜಾ ಪಠಣದ ಹಾದಿಯಲ್ಲಿ ಭವ ಭಾವ ಬೆಸೆದವರು ನನ್ನ ಗುರುಗಳು ಇವರು ನನ್ನ ಗುರುಗಳು ಕೋಲು ಬೆತ್ತದ ರುಚಿ ತೋರಿಸಿ ಭಕ್ತಿಯುಕ್ತಿ ಮೂಡಿಸಿದವರು ಕಪ್ಪು ಹಲಗೆಯ ಹದ ಮಾಡಿ ಜ್ಞಾನದ ರುಚಿ ತಿಳಿಸಿದವರು ಮೈದಾನದಿ ಮೈ ಮುರಿಸಿ ಆರೋಗ್ಯ ಭಾಗ್ಯ ಕರುಣಿಸಿದವರು ನನ್ನ ಗುರುಗಳು ಇವರು ನನ್ನ ಗುರುಗಳು"

----------------------------------

ನೋಂದಣಿ ಐಡಿ : KPFS2-8212

0
Votes
107
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top