ಮಳೆ
ರಚನೆ : ಸಿಂಧು ಎನ್
----------------------------------
ಎತ್ತ ನೋಡಿದರೂ ಕಾರ್ಮೋಡಗಳ ಗುಂಪು ಬೇಸಿಗೆಯಲ್ಲಿ ಕಾದ ಭುವಿಗಿಂದು ತಂಪು ಭಾನು ಕರಗುವುದೋ ಎಂಬಂತ ಮಳೆ ಆ ಮಳೆಗೆ ಹಸಿರುಟ್ಟು ನಳನಳಿಸುತ್ತಿದೆ ಇಳೆ ವರುಣನ ಸ್ವಾಗತಿಸುತಿದೆ. ತಲೆದೂಗುತ ವನರಾಶಿ ಹೊರ ಹಾರಲಾರದೆ ಬೆಚ್ಚನೆ ಕೂತಿದೆ ಖಗರಾಶಿ ಹಳ್ಳ ಕೊಳ್ಳಗಳು ತುಂಬಿ ಸೊಕ್ಕಿ ಹರಿಯುತ್ತಿದೆ ನದಿ ಅಲೆಯುಕ್ಕಿ ಭೋರ್ಗರೆಯುತಲಿದೆ ಆ ಮಹಾಶರಧಿ
----------------------------------
ನೋಂದಣಿ ಐಡಿ : KPFS2-8210