ಮನುಜಮತ ವಿಶ್ವಪಥ
ರಚನೆ : ಜ್ಞಾನೇಶ್ ಕುಮಾರ್ ಕೆ
----------------------------------
ನಾನು ನಾನೆಂಬ ಭ್ರಾಂತಿನಲಿ ಎಲ್ಲವೂ ನನ್ನದೆಂಬ ಭ್ರಮೆಯಲಿ ಸಿಲುಕಿ ಮೆರೆಯಬೇಡ ಮನುಜ ನೀನು ಬದಲಾಗು.... ಪಡೆದ ಜನ್ಮ ನಿನ್ನದಲ್ಲ, ಇರುವ ಜೀವ ಶಾಶ್ವತವಲ್ಲ ನಡೆಸಿದಂತೆ ನಡೆವ ಪಾತ್ರ ನೀನು ಸ್ಥಿರವಾಗಿ ಉಳಿಯದು ನಿನ್ನದೇನು.... ಅಂಕು ಡೊಂಕಿನ ಬಿಂಕವ ತೋರಿ ಅಂಕೆ ಶಂಕೆಯ ಎಲ್ಲೆಯ ಮೀರಿ ಕೊಂಕನಾಡುವ ನಿನಗೆ ಸುಂಕ ತಪ್ಪದು ಕೊನೆಗೆ... ಅಂಧಕಾರದ ಮೌಢ್ಯವ ಕಿತ್ತು ಹೃದಯದಿ ಪ್ರೀತಿ ಮಮತೆಯ ಬಿತ್ತು ಜಗಕೆ ಸಾರು ಮನುಜಮತ ಅದುವೇ ಇಂದು ವಿಶ್ವಪಥ...
----------------------------------
ನೋಂದಣಿ ಐಡಿ : KPFS2-8192