ಶತಮಾನದ ಮಾತು ನಿಜವಾಯಿತು
ರಚನೆ : ಸರಸ್ವತಿ ಸಿ.ಎಸ್
----------------------------------
ಕೇಳುವರಿಲ್ಲ ಕೂಗಿದರು ಕೊಡುವವರಿಲ್ಲ ಬೇಡಿದರು ಬಿದ್ದು ಅತ್ತರೆ, ಎತ್ತುವವರಿಲ್ಲ ತಾಳ್ಮೆಗೆ ಬೆಲೆಯ ಕಟ್ಟುವರು ಎಲ್ಲಾ. ಸತ್ಯದ ಹಾದಿ ಮುಚ್ಚಿದ ಮೇಲೆ ಸಜ್ಜನ ನಿನಗೆ ಬದುಕಿಲ್ಲ. ಸುಳ್ಳೇ ತುಂಬಿರುವ ಭೂ ಲೋಕದಲ್ಲಿ || ಕಲಿಯುಗದ ಕಪ್ಪು ಛಾಯೆಗೆ ಬೆದರಿ ಮೌಲ್ಯಗಳೆಲ್ಲವು ಮಣ್ಣಾದವು. ಮಿತ್ರನಂತಿದ್ದವರೆಲ್ಲ ಶತ್ರುಗಳಾದರು ಜೀವ ಕೊಟ್ಟವರೆ ಉಸಿರ ಕಸಿದರು ರಕ್ತದ ಒಡಲಲಿ ಮೌನವಾಗಿ ಮಲಗಿದ್ದಾಗ ಗಾಳಿಯು ನಗುತ ಹೇಳಿತು ಶತಮಾನದ ಮಾತು ನಿಜವಾಯಿತು||
----------------------------------
ನೋಂದಣಿ ಐಡಿ : KPFS2-8190