ತ್ಯಾಗಮಯಿ ತಾಯಿ
ರಚನೆ : ಮಲ್ಲಿಕಾರ್ಜುನ ಸಣ್ಣಮನಿ
----------------------------------
ಜನ್ಮ ಕೊಡುವಾಗ ಸತ್ತು ಮತ್ತೆ ಹುಟ್ಟುವಳು... ತನ್ನ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವಳು... ನಿಷ್ಕಲ್ಮಶ ಮನದಿ ಹರಸುವಳು... ಮಕ್ಕಳಿಗೆ ಮೊದಲ ಗುರುವಾಗುವಳು... ತಪ್ಪು ಮಾಡಿದಾಗ ಕೋಪದಿಂದ ಗದರುವಳು... ಸ್ವಲ್ಪ ಕಾಲವಾದ ಮೇಲೆ ಹಾಗೆ ಮಾಡಬಾರದೆಂದು ಮುದ್ದಿಸುವಳು... ಕ್ಷಮೆಯಾಧರಿತ್ರಿ ಅವಳು... ಭೂಮಿ ತಾಯಿಯ ಹೋಲುವಳು... ಕರುಣೆಯ ಪ್ರತೀಕವಾಗಿರುವಳು... ಮಕ್ಕಳ ಯಶಸ್ಸಿನ ಬೆಂಗಾವಲಾಗಿರುವಳು... ತನ್ನ ಸರ್ವಸ್ವವನ್ನೂ ಧಾರೆಯರೆಯುವಳು... ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಪರಿ ಪರಿಯಾಗಿ ಬೇಡುವಳು... ತನ್ನ ಮಕ್ಕಳಿಗೋಸ್ಕರ ಜೀವನವನ್ನೇ ಮುಡಿಪಾಗಿಡುವಳು... ನಿಸ್ವಾರ್ಥ ಸೇವೆ ಮಾಡುವಳು...
----------------------------------
ನೋಂದಣಿ ಐಡಿ : KPFS2-8183