ರೈತನ ಬೆವರಿನ ಬೆಲೆ
ರಚನೆ : ಲಕ್ಷ್ಮೀ ಮಹಾಂತೇಶ ದೊಡಮನಿ
----------------------------------
ಭೂಮಿಯ ಉಳುವ ರೈತನು ನಾನು ನನ್ನಯ ಕಷ್ಟವ ಅರಿಯುವರಾರು ಬಿಸಿಲುಗು ಮಳೆಗೂ ಬಗ್ಗದೆ ನಾನು ಭೂತಾಯಿಯ ಅಪ್ಪಿ ತೆಗೆಯುವೆ ಪೈರು ರೆಟ್ಟೆಯ ಕಟ್ಟಿ, ನೀರನು ಬಿಟ್ಟಿ ಸಾಲವ ಮಾಡಿ,ತೆಗೆದೇನು ಬೆಳೆಯ ಬುಟ್ಟಿ ಬುಟ್ಟಿ ಹರುಷದ ಕಂಬನಿ ಭೂತಾಯಿಯ ಮಡಿಲಿಗೆ ಚಿಲ್ಲಿ ಹೊರಟೆನು ಬೆಳೆಗೆಬೆಲೆಯನು ಕೇಳಲು ಸಂತೆಯಲ್ಲಿ ಲಾರಿಯ ತುಂಬಿ ಹೊರಟಿಹ ನನಗೆ ಬೆಳೆಗೆ ಇಲ್ಲದ ಬೆಲೆಯನು ಕೇಳಿ ಹರುಷವೇ ಇಲ್ವಾ ವರುಷ ಪೂರ್ತಿ ದುಡಿದರು ಕೂಡ ಬೆಲೆಯೇಸಿಗದ ರೈತನಬೆವರಿಗೆ ಕೈ ಮಾಡಿಕರೆವುದು ನಿರಾಸೆಯೆಂಬ ಹಗ್ಗದ ಕುಣಿಕೆಯೇ ಅಲ್ವಾ
----------------------------------
ನೋಂದಣಿ ಐಡಿ : KPFS2-8181