ಕವಿಯ ಗವಿ
ರಚನೆ : ಪ್ರಶಾಂತ್ ಹೆಚ್ ಎಸ್
----------------------------------
ಪ್ರತೀ ಕವಿಯ ಒಳಗೊಂದು ಕತ್ತಲ ಗವಿ, ಆ ಗವಿಯ ಒಳಗುಂಟು ಕಾಣದ ಸವಿ, ಆ ರವಿಯೂ ಮೀರಿದ ಭವಿ, ಬೆಳಕಲ್ಲು ಕತ್ತಲ ಕಂಡ ಅನುಭವಿ, ಜೀವನದ ರಸ ಸವಿದು.. ಹಿಮ್ಮಡಿಯ ತಳ ಸವೆದು.. ಭಾವಗಳ ಭವ ತೊರೆದು ಬಂದಿಹನೀ ಕವಿ.. ಹೆತ್ತವರ ಮಡಿಲ ಕಸಿದು, ನಿಂತಿರುವ ನೆಲ ಕುಸಿದು.. ಕಣ್ಣೀರ ಬಸಿದು ಬಂದಿಹನೀ ಕವಿ, ಹತ್ತಿರದ ಅಪರಿಚಿತರ.. ಗೊತ್ತಿರದ ಪರಿಚಿತರ.. ಮನವ ಸೇರ ಬಂದಿಹನೀ ಕವಿ, ಹಾದು ಬಂದಿಹನೀ ಕವಿ.. ಅನ್ಯ ಭಾಷೆಗಳ ಕಾರ್ಮೋಡದೀ , ಆಂಗ್ಲ ಭಾಷೆಯ ವ್ಯಾಮೋಹದಿ.. ಕಂಗ್ಲಿಷ್ ಭಾಷೆಯ ವ್ಯಾಕರಣ ಕಲಿತ ಜನಕೆ ಕನ್ನಡದ ಸವಿ ತೋರುವ ಕಾತುರದಿ.. ನಿಂದಿಹನೀ ಕವಿ, ಆ ಕವಿಯ ಒಳಗೊಂದು ಕತ್ತಲ ಗವಿ. ಇವನಂತರಾಳವ ಅರಿಯಲು ಕವಿಯಾಗಬೇಕು ರವಿ, ಬೆಳಕಾಗ ಬೇಕು ಸಿಹಿ-ಕಹಿ ಸವಿ..."
----------------------------------
ನೋಂದಣಿ ಐಡಿ : KPFS2-8163