ಅವಳೆಂದರೆ
ರಚನೆ : ಐಶ್ವರ್ಯ ಎಸ್
----------------------------------
ಮುದ್ದಾದ ಮೊಗದ ಸುಂದರಿಯವಳು ಮುಗ್ಧ ಮನಸಿನ ಅಚ್ಚರಿಯವಳು ನೋವಿದ್ದರೂ ನಗುವ ಗುಣದವಳು ಯಾರನ್ನೂ ನೋಯಿಸದೆ ಮುಗುಳ್ನಗುವವಳು ಭಾವನೆಗಳಿಗೆ ಬೆಲೆ ಕೊಡುವವಳು ಬದುಕಿಗೆ ಭರವಸೆಯ ತುಂಬಿದವಳು ಅನುಮಾನಗಳಿಗೆ ಕಿವಿ ಕೊಡದವಳು ಅನುಬಂಧಗಳ ಬಿಗಿಯಾಗಿ ಹಿಡಿದವಳು
----------------------------------
ನೋಂದಣಿ ಐಡಿ : KPFS2-8132