ಹೆಣ್ಣು
ರಚನೆ : ಮಂಜುನಾಥ ಗುಪ್ತ. ಎನ್.ವಿ
----------------------------------
ಜಲ ಹೆಣ್ಣು, ನೆಲ ಹೆಣ್ಣು ಅನ್ನ ಹೆಣ್ಣು, ದೀಪ ಹೆಣ್ಣು ಹೊನ್ನು ಹೆಣ್ಣು, ಪ್ರಕೃತಿಯೆ ಹೆಣ್ಣು ಜಗವೆಲ್ಲ ಹೆಣ್ಣಾಗಿರಲು ನಿನ್ನೊಳು ಏನುಂಟು ಮನುಜ! ಜ್ಞಾನಿ ನೀನಾಗಿರಲು ವಿಜ್ಞಾನದ ಅರಿವಿರಲು ನೀನೇಕೆ ಚಿವುಟುವೆ ಮೊಳಕೆ ಒಡೆಯುವ ಮುನ್ನ ಕೂಸು ಹೆಣ್ಣೆಂದು. ಅಜ್ಞಾನಿ ಅವನಿರಲು ಜ್ಞಾನದ ತಿಳಿ ಇರದಿರಲೆನಂತೆ ಹೆಣ್ಣ ಒಳಗಿನ ಮೊಳಕೆಯ ದೇವ ಪ್ರಸಾದ ಎನ್ನುವನೇ ಹೊರತು ಚಿವುಟುವನೆ ಅವನು ಕೂಸು ಹೆಣ್ಣೆಂದು.
----------------------------------
ನೋಂದಣಿ ಐಡಿ : KPFS2-8100