Submission 4409

ಪುನೀತ ನಮನ

ರಚನೆ : ಆಂಥೋನಿ ಪ್ರೇಮ್ ಎಂ

----------------------------------

ದೇಹದ ಮನಸ್ಸಿಗೆ ಯಾಕೋ ಸಂತಾಪದ ನುಡಿ, ವಿಷಯ ತಿಳಿದಾಗ ನಡಗಿತು ನರನಾಡಿ, ಗೊತ್ತಿಲ್ಲದೆ ದೇವರಲ್ಲಿ ಶರಣಾಗಿದೆ ನಮ್ಮೆಲ್ಲರ ಹಿಮ್ಮಡಿ, ಭಕ್ತರೆಲ್ಲರು ನಿಮ್ಮ ದೇಹವನ್ನು ಒತ್ತು ಹೋಗುತ್ತಿದ್ದಾರೆ ಶೋಕ ಸ್ವರಗಳಾಡಿ. ಹೀಗೋ ಮುಗಿಯಿತು ಜೀವನ ನಿಮ್ಮ ಕೊನೆಯ ದಾರಿಯಲ್ಲಿ, ಅನೇಕ ಮಕ್ಕಳನ್ನ ಸಾಕಿದೆ ನಿನ್ನಯ ಆಶ್ರಯದಲ್ಲಿ, ನೀವೇ ದೇವರಂತೆ ಕಂಡಿರಿ, ಆ ಮಕ್ಕಳೆಲ್ಲರ ಕಣ್ಣಿನಲ್ಲಿ, ನಿಮ್ಮಪುಣ್ಯಕಾರ್ಯಗಳು ಖಂಡಿತು ನಿಮ್ಮ ಕೊನೆಯ ಸಾವಿನ ಪರದೆಯಲಿ. ನಿಮ್ಮ ಶ್ರಮವನ್ನೆಲ್ಲ ಮಡಿದಿರಿ ಕನ್ನಡ ನಾಡಿನ ಏಳಿಗೆಗಾಗಿ, ನಿಮ್ಮ ಸಾಧನೆಗಳು ಬೇರೂರಿ ಉಳಿಯಲಿ ಯುವಶಕ್ತಿಯ ಬಾಳ ಬೆಳಕಾಗಿ, ಹೀಗೆ ಸದಾ ಕಂಪಿಸುತ್ತಿರಿ ಬಾಳಂಗಣದ ನಕ್ಷತ್ರವಾಗಿ, ಪ್ರಭುವಿನಲ್ಲಿ ಕರಒಡ್ಡಿ ಬೇಡುತ್ತೇವೆ ನಿಮ್ಮಯ ಚಿರ ಆತ್ಮ ಶಾಂತಿಗಾಗಿ

----------------------------------

ನೋಂದಣಿ ಐಡಿ : KPFS2-8091

12
Votes
173
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top