ಹಬ್ಬ
ರಚನೆ : ಮಾರುತಿ ಇ
----------------------------------
ಊರೆಲ್ಲ ಹಸಿರುಟ್ಟು ಅಲಂಕಾರವಾಗಿದೆ ಬಂಧು ಬಳಗ ಆಗಮನವಾಗಿದೆ ಹೊಸ ಧಿರಿಸುಗಳು ಆಲಂಗಿಸಿದೆ ಸಡಗರವು ಸಂಭ್ರಮದಿ ಮನೆ ಮಾಡಿದೆ ಮೂಕವಿಸ್ಮಿತನಾಗಿಸಿದೆ ಕಂಡು ಕಲರವ ಸರ್ವರ ಮುಖದಲ್ಲಿ ಮಂದಹಾಸವ ಖುಷಿಯಲ್ಲಿ ಬರಮಾಡಿ ಹೊಸವರುಷವ ಅನುಭವಿಸಿ ಇರುವೊಂದು ಜೀವನವ ಕಂಗೊಳಿಸಿವೆ ಹಸಿರು ತೋರಣ ಜೀವನವಾಗಿಸಿದೆ ಸಿಹಿ ಹೊರಣ ಖುಷಿಯಾಗಿಸಿದೆ ಮನದ ಅಂಗಣ ಸೃಷ್ಟಿಯಾಗಿದೆ ಹಬ್ಬದ ವಾತಾವರಣ
----------------------------------
ನೋಂದಣಿ ಐಡಿ : KPFS2-8051