Submission 4361

ಕಾಡಿನಲ್ಲಿ ರಾತ್ರಿ ಕಳೆವ ಆಸೆ

ರಚನೆ : ರವಿಕುಮಾರ ಮಹಾದೇವ

----------------------------------

ಬೆಟ್ಟವೇರಿ ತುದಿಯ ತಲುಪಿ ರಾತ್ರಿ ಕಳೆವ ಆಸೆಯು, ಕಲ್ಲುಬಂಡೆಗಳಜಾಗವದುವೆ ಮಲಗಲು ಹಾಸ್ಗೆಯು. ದಟ್ಟಕಾಡಿನ ಗುಡ್ಡವದು ಮೋಡರಾಶಿಯು ಮೇಲಿದೆ, ಬೀಸೋಗಾಳಿ ಸೆಳೆತ ಜಾಸ್ತಿ ನಿಲ್ಲದೆ ಮೈ ನಡುಗಿದೆ. ಕತ್ತಲಾಗಲು ಕಾಡುಮೌನವಾದರೂ ಹುಲಿಯ ಘರ್ಜನೆ ಕೇಳಿದೆ, ಚಳಿಯು ಮರೆತು ಒಡಲು ಬೆವರಿ ಕುಂತಲ್ಲಿಯೇ ನಡುಗಿದೆ, ಬೆಳಕು ಕೊಡುವ ರವಿಯ ನೆನೆದು ಗವಿಯ ಒಳಗೆ ಅಡಗಿದೆ. ಕಣ್ಣುಮುಚ್ಚಿ ಮಲಗಲಲ್ಲಿ ಜಿಗಣೆ ಉಣ್ಣೆ ಕಾಟವು, ದಿಕ್ಕುಗಾಣದೆ ತಿರುಗಿ ನೋಡದೆ ನಿದ್ರಾದೇವಿ ಓಟವು. ನಭದಲಂದು ಚಂದ್ರತಾರೆಗಳ ಮಿನಗುಹೊಳಪು ಕಂಡಿತು, ಸ್ವಚ್ಛಸುಂದರ ಬಾನಮಂದಿರ ಭಯದ ಮನವ ಕೊಂದಿತು. ಮಂಜಿನಿಬ್ಬನಿ ಪೊರೆಯು ಹರಿದು ರವಿಯ ಬೆಳಕು ಕಂಡಿತು, ಕಾಡಿನಲ್ಲಿ ರಾತ್ರಿ ಕಳೆವ ಆಸೆ ಅಂತ್ಯವಾಯಿತು, ಅನುಭವವೆಂಬ ವಿದ್ಯೆಯೊಂದು ಮನದ ಪುಟವ ತುಂಬಿತು.

----------------------------------

ನೋಂದಣಿ ಐಡಿ : KPFS2-8050

9
Votes
310
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top