Submission 4339

ಸಮತೋಲನ

ರಚನೆ : ಟಿ.ಎಂ ಜಗದೀಶ್

----------------------------------

ಸುತ್ತ ಆವರಿಸಿರುವ ನೀಲ ಸಾಗರದ ನಡುವೆ ವಿಶ್ವವಿದು ಬ್ರಹ್ಮಾಂಡ ಹೆಬ್ಬಂಡೆ.. ವರ್ತುಲದ ತಳದಲ್ಲಿ ಮಾನುಷ ಜನ್ಮ ಗೋಲಕ.. ಆಯತದ ಶಿಲೆಯಂತೆ ಬದುಕು ಅನಿವಾರ್ಯ! ಬದುಕೆಂಬ ತಕ್ಕಡಿಯ ತಟ್ಟೆಯೊಂದರ ಗೋಪುರ- ದಲ್ಲಿ ಕಷ್ಟ-ನಷ್ಟಗಳ ಗಟ್ಟಿ ಉರುಟು ಕಲ್ಲುಗಳು.. ನಡುನಡುವೆ ಸುಖ-ಸಮೃದ್ಧಿ ಕಡೆದಿಟ್ಟ ಶಿಲೆಗಳು.. ಬಿರುಗಾಳಿ-ಮಳೆ-ಗುಡುಗು-ಸಿಡಿಲಿಗೆ ಅಳುಕದೆ ಸಮಚಿತ್ತ ಕಾಯ್ದು ನಿಂತಿರುವನಕ ಸಮತೋಲನ.. ಬಾಳ ಪಯಣವೆಂಬುದು ಬಂಗಾರ ತೋರಣ..!!

----------------------------------

ನೋಂದಣಿ ಐಡಿ : KPFS2-8036

96
Votes
617
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top