ಭಾವ ತರಂಗಿಣಿ
ರಚನೆ : ಶ್ರೀಕರ್ ಕಟ್ಟಿ
----------------------------------
ನನ್ನೆದೆಯ ಒಳಗಿನ ಮೌನಕೆ ಮೌನವೇ- ಸರಿ ಭಾಷೆಯದು ಸ್ವಭಾಷೆಯದು ಸುಂದರ ಪರಿಭಾಷೆಯದು.. ನನ್ನೆದೆಯೊಳಗಿನ ಭಾವಾಂತರಾಳದಲಿ ಒಲವೇ- ಜೀವನದ ಭರವಸೆಯದು ಭರವಸೆಯೊಳಗೊಂದು ಸಮರಸವದು.. ನನ್ನೆದೆಯಲಿ ಮೂಡುವ ನಗುವಿಗೆ ನೆಮ್ಮದಿಯೇ- ಅರುಣನ ಕಿರಣವದು ಆಭರಣವದು, ರತ್ನಾಭರಣವದು.. ನನ್ನೆದೆಯಲಿ ಉರಿಯುವ ಜ್ಯೋತಿಗೆ ಸಂಸ್ಕಾರವೇ- ಪ್ರಕಾಶಿಸುವ ನಿತ್ಯ ಹೊಳಪದು ಬೆಳಕದು ಸುಂದರ ಹೊಂಬೆಳಕದು.. ನನ್ನೆದೆಯಲಿ ಹುಟ್ಟುವ ಹಾಡುಗಳಿಗೆ ಭಾವವೇ- ಕಲ್ಪನೆಯದು ವಿಕಲ್ಪನೆಯದು ಕಲ್ಪಾಂತರದ ಭಾವ ಸು- ತರಂಗಿಣಿಯದು..
----------------------------------
ನೋಂದಣಿ ಐಡಿ : KPFS2-8011