Submission 4310

ಪ್ರೇಮಾಮೃತ

ರಚನೆ : ಪ್ರಭಾಕರ್ ಪತ್ತಾರ್

----------------------------------

ಸಾವಿರ ಸಾವಿರ ಸಾಲುಗಳು ಸಾಲವು ಸಖಿಯೇ, ಸಾವಿರದ ನಮ್ಮ ಪ್ರೇಮಸಂಕಲನ ಬರೆಯಲು. ಸಹಸ್ರ ಸಹಸ್ರ ಸ್ವರಗಳು ಸಾಲವು ಸಾಥಿಯೇ, ಸುಶ್ರಾವ್ಯ ನಮ್ಮ ಪ್ರೇಮಗೀತೆಯ ಹಾಡಲು. ಕೇಳಿದ್ದೆ ಒಲವಾಗುವುದು ಒಂದೇ ಸಲವೆಂದು, ನಿನ್ನ ನೋಡೋ ಪ್ರತೀ ಪ್ರಸಂಗ ಪ್ರೇಮಾಂಕುರಗಳು. ಮನದ ಕಟ್ಟಡಕೆ ನೀ ಬಲಗಾಲಿಟ್ಟು ಬಂದಿರಲು, ಅತಿಥಿಯಲ್ಲ ನೀ ಮನ-ಮಹಲಿನ ಒಡತಿಯು. ಇನಿತೆಲ್ಲ ಇರುವಾಗ ಹೇಗೆ ನಾ ಹೇಳಲಿ ಹೇಳು, ಸಾಕಿದೊಂದೆ ಜನುಮ ನಿನ್ನ ಒಲವ ವರ್ಣಿಸಲು. ಅನಂತ ಅನಂತ ಮರುಜನ್ಮ ಕೇಳಿ ಪಡೆವೆನು, ಮತ್ತೆ ನಿನ್ನವನಾಗಲು- ಪ್ರೇಮಾಮೃತವ ಸವಿಯಲು.

----------------------------------

ನೋಂದಣಿ ಐಡಿ : KPFS2-8010

0
Votes
140
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top