Submission 4210

ನಿನ್ನೊಳಗೆ ನೀನು ಲೀನವಾಗು

ರಚನೆ : ಬಾಣದ ಪಂಪಣ್ಣ

----------------------------------

ಚಿತ್ತದಿಂದೊರಬರುವ ಚಿನ್ಮಯವು ನೀನಾಗು ಸತ್ಯದಿಂದೊರಬರುವ ಸತ್ವವು ನೀನಾಗು ರಸವಾಗು ಜಸವಾಗು ಹಸು ಒಡಲ ಅಸುವಾಗು ಉದರಕ್ಕೆ ಮೊಸರಾಗು ಅಧರಕ್ಕೆ ಕೆಂಪಾಗು ನೊಂದವರ ನಲಿವಾಗು ಬೆಂದವರ ಬೆಳಕಾಗು ಹುಗ್ಗಿಯೊಳು ಸಿಹಿಯಾಗು ಹಿಗ್ಗಿನೊಳು ಖುಷಿಯಾಗು ಮಾತಿನೊಳು ಹಿತವಾಗು ನಿತ್ಯವೂ ಸ್ತುತನಾಗು ಏನಾದರಾಗು.... ನಿನ್ನೊಳಗೆ ನೀನು ಲೀನವಾಗು.

----------------------------------

ನೋಂದಣಿ ಐಡಿ : KPFS2-7923

1
Votes
124
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top